Home

Welcome to the official website of City Municipal Council, Sagar            ಸಾಗರ ನಗರಸಭೆ ಯ ವೆಬ್ ಸೈಟ್ ಗೆ ಸುಸ್ವಾಗತ

ಕರ್ನಾಟಕದ 74 ಕೆ.ಎಂ.ಆರ್.ಪಿ ನಗರಗಳಲ್ಲಿ ಸಾಗರ ನಗರವೂ ಒಂದಾಗಿದೆ. 2007ನೇ ಆಗಸ್ಟ್ ನಲ್ಲಿ ಸಾಗರ ನಗರದ ವೆಬ್ ಸೈಟ್ ನ್ನು ಪ್ರಾರಂಬಿಸಲಾಯಿತು. ಸಾಗರದ ಯು.ಎಲ್.ಬಿ. ಯನ್ನು 1931 ರಲ್ಲಿ ಆರಂಭಿಸಲಾಗಿ 2007 ರಲ್ಲಿ ಸಿ.ಎಮ್.ಸಿ ಆಗಿ ಪರಿವರ್ತಿಸಲಾಯಿತು. ಸಾಗರದಲ್ಲಿ 31 ವಾರ್ಡ್ ಗಳಿದ್ದು, 31 ಜನ ಕೌನ್ಸಿಲರ್ ಗಳನ್ನು ಒಳಗೊಂಡಿದೆ. 2001 ರ ಜನಗಣತಿ ಪ್ರಕಾರ 50,135 ಜನಸಂಖ್ಯೆಯನ್ನು ಹೊಂದಿದೆ. ಈ ನಗರದ ಸುತ್ತಳತೆ 19.71 ಚದರ ಕಿ.ಮೀ. ಆಗಿದೆ.  ಸಾಗರ ಪುರಸಭೆಯ ಸುಮಾರು 1869ರಲ್ಲಿ ಸ್ಥಾಪನೆಯಾಗಿ 1969ರಲ್ಲಿ ಶತಮಾನೋತ್ಸವ ಆಚರಣೆ ಮಾಡಿ ಅಂದಿನಿಂದಲೂ ಶಿವಮೊಗ್ಗ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಪಡೆದು ನಾಗರೀಕರ ಪ್ರೀತಿಗೆ ಪಾತ್ರವಾಗಿರುವ ಸ್ಥಳೀಯ ಸಂಸ್ಥೆಯಾಗಿದೆ. ಪುರಸಭೆ ಅವಧಿಯಲ್ಲಿ ನಾಗರೀಕರಿಗೆ ಉತ್ತಮ ಸೇವೆ ನೀಡಿದ ಹಿನ್ನಲೆಯಲ್ಲಿ 1997-98ರಲ್ಲಿ ರಾಜ್ಯ  ಸರ್ಕಾರದಿಂದ ನೀಡುವ ಬಹುಮಾನವನ್ನು ಸಹಾ ಪಡೆದಿರುತ್ತದೆ


 Sagara city is one  of the 74 KMRP  cities in the Karnataka state. The Website of this city was Launched on August 2007. Sagar ULB was started in the year 1931 and became CMC grade two in the year 2007.The ULB consist of 31 wards with the respective number of coucilors.The total population of the city 50135 as per 2001 census and total area of the city is 19.71 sq.kms. The ULB has Received prize from Govt. of Karnataka in 1997-98


24 Hours Help Line Service - Dial 08183-220178 / 24 ಗಂಟೆ ಸಹಾಯವಾಣಿ: 08183-220178         ತುರ್ತು ಸಹಾಯ  /  Emergency  (Sagara Complete Information)


ಜೋಗ ಜಲಪಾತ: ವಿಶ್ವವಿಖ್ಯಾತವಾದ ದಕ್ಷಿಣ ಭಾರತದ ಕೇಂದ್ರವಾದ ಕರ್ನಾಟಕದಲ್ಲಿ , ಪ್ರವಾಸಿಗರ ರಮಣೀಯ ತಾಣವಾದ  ಜೋಗಜಲಪಾತವು ಸಾಗರ ತಾಲ್ಲೂಕಿನ ಒಂದು ಭಾಗವಾಗಿದೆ. ಇದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಮಧ್ಯದಲ್ಲಿದೆ. ಸಾಗರ ನಗರದಿಂದ 40 ಕಿ.ಮೀ ಅಂತರದಲ್ಲಿದೆ. ಅದ್ಬುತವಾದ ರಮಣೀಯವಾದ ಶರಾವತಿ ಜಲಪಾತವು 900ಅಡಿ ಎತ್ತರದಿಂದ ದುಮ್ಮಿಕ್ಕಿ ಹರಿಯುತ್ತಿದ್ದು ಭಾರತ ದೇಶದಲ್ಲೇ ಅತೀ ಎತ್ತರದಿಂದ ದುಮುಕುವ ಜಲಪಾತ ಎಂದು ಖ್ಯಾತಿಯಾಗಿದೆ. ಶರಾವತಿಯಿಂದ ಬರುವ ಜೋಗ ಜಲಪಾತವು 4 ಭಾಗಗಳಾಗಿ ಹರಿದು ಬರುವುದನ್ನು ಇಲ್ಲಿ ಕಾಣಬಹುದು. ಮೊದಲನೆಯದು 954 ಅಡಿ ಆಳಕ್ಕೆ ದುಮುಕುತ್ತದೆ. ಹಾಗೆ ಇದು ದುಮುಕುವ ಸುತ್ತಳತೆಯ 100 ಮೀ. ಗಿಂತ ಹೆಚ್ಚು ದಪ್ಪವಾಗಿ ಹರಿಯುತ್ತದೆ. ಇದು ನಂತರ ರೋರರ್ ಜಲಪಾತಕ್ಕೆ ಸೇರುತ್ತದೆ. ಎರಡನೇಯದಾಗಿ ರೋರರ್ ಅತಿ ವೇಗವಾಗಿ ರಭಸದಿಂದ ಆಳಕ್ಕೆ ದುಮುಕುತ್ತದೆ.  ಮೂರನೇಯದಾಗಿ ರಾಕೆಟ್ ಇದು ರಾಕೆಟ್ ನಷ್ಟೇ ವೇಗವಾಗಿ ತಳಕ್ಕೆ ದುಮುಕುತ್ತದೆ. ನಾಲ್ಕನೇಯದಾಗಿ ರಾಣಿ ಈ ಜಲಪಾತ ನೋಡಲು ಸುಂದರವಾಗಿದೆ.ಈ ಜಲಪಾತವು ಲಿಂಗನಮಕ್ಕಿ ಆಣೆಕಟ್ಟು ಒಳಗೊಂಡಿದೆ.  ಶರಾವತಿ ಜಲಪಾತವು 1819 ಅಡಿ ಸಮುದ್ರ ಮಟ್ಟಕ್ಕಿಂತ ಮೇಲಿದೆ. ಈ ಆಣೆಕಟ್ಟನ್ನು ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಘಟಕ ಎಂದು ಕರೆಯಲಾಗಿದೆ. ಸಾರಿಗೆ ಸಂಪರ್ಕ:  ಈ ಸ್ಥಳ ಉತ್ತಮ ರಸ್ತೆ ಮತ್ತು ರೈಲು ಮಾರ್ಗ ಹೊಂದಿದೆ. ಶಿವಮೊಗ್ಗ ನಗರಕ್ಕೆ ಮತ್ತು ಜೋಗ ಜಲಪಾತಕ್ಕೆ ಹಲವು ಖಾಸಗಿ ಮತ್ತು ಸರ್ಕಾರಿ ವಾಹನ ವ್ಯವಸ್ಥೆ ಕೂಡ ಇದೆ.


 Jog Falls :The most thrilling spectacle in the entire western region of Karnataka are the world famous Jog Falls.   It is Situated on the borders of Shimoga and North Kanara ,40 Kms from this city. The wondrous sight is that of river Sharavathi taking a spectacular leap into the chasm from a height of 900 feet to from the highest waterfalls in India. The river Sharavathi hurtles in 4 distinct cascades. The first of these falls is known as the 'Raja' - the grandest, an unbroken sheet of water, the Raja plunges into the vapor shrouded poll 900 feet below. A few 100 feet way down, with a thunderous gush, Raja is joined by 'Roarer'. Leaping down with great speed in a series of cascades in the 'Rocket'. And gliding away in a feminine grace ,'Rani'. The effect is greatly heightened by the wild and beautiful region around which is covered with a wealth of luxuriant vegetation. The steps cut into rocks will lead you to the very depths of the fall and shower you with vaporous spray that bounces off these rocks.
Around Jog :  There is also the splendid view of the Linganamakki dam, which is 1819 feet above sea level built across the river Sharavathi. This dam is the main feeder reservoir of the Mahatma Gandhi Hydroelectric project.Transport : The place is well connected by rail and road from Shimoga city and number of government & private buses ply between Shimoga and Jog Falls.  


ನಗರ ರಚನೆ:

      ಕೆಳದಿ ಅರಸರ ಕಾಲದಲ್ಲಿ ಸಾಗರವು ವ್ಯಾಪಾರ ಅಭಿವೃದ್ಧಿಗಳ ಮಾರುಕಟ್ಟೆ ಕೇಂದ್ರವಾಗಿತ್ತು. ಮೈಸೂರು ಒಡೆಯರ ಆಡಳಿತದಲ್ಲಿ ದಿನಾಂಕ: 05-03-1869 ರಂದು ಸಾಗರದ ಪುರಸಭೆಯು ಮುನಿಸಿಪಲ್ ಬೋರ್ಡ್ ಎಂಬ ನಾಮಾಂಕಿತದಿಂದ ಅಸ್ತಿತ್ವಕ್ಕೆ ಬಂದಿತು. ಆರಂಭದಲ್ಲಿ ಇಬ್ಬರು ಸರಕಾರಿ ಅಧಿಕಾರಿಗಳು ಹಾಗೂ ಈರ್ವರು ಖಾಸಗಿ ಸದಸ್ಯರು ಇದರ ಸಂಚಾಲಕರಾಗಿದ್ದು , ಪುರಸಭೆಯು ಆಕ್ಟ್ರಾಯಿ ಹಾಗೂ ಕಟ್ಟಡ ತೆರಿಗೆಯನ್ನು ಮಾತ್ರ ಆದಾಯ ಹೊಂದಿತ್ತು. ದಿನಾಂಕ: 05-03-1869 ರಂದು ಪ್ರಾರಂಭವಾದ ನಗರಸಭೆಯ ಮೊಟ್ಟಮೊದಲನೆ ನಡವಳಿಕೆಯ ಪ್ರತಿಯು ಪುರಸಭೆಯಲ್ಲಿ ಈಗಲೂ ಇದೆ. ಮೈಸೂರು ಒಡೆಯರು ಸಾಗರಕ್ಕೆ ಭೇಟಿಯಿತ್ತಾಗ ಚಾಮರಾಜ ಪೇಟೆ ಎಂಬ ಬಡಾವಣೆಯು ರೂಪುಗೊಂಡಿತು. 1969 ರಲ್ಲಿ ನಗರಸಭೆಯು ಶತಮಾನೋತ್ಸವ ವನ್ನು ಆಚರಿಸಿತು. ನಗರದ ಅಭಿವೃದ್ಧಿಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕಾರ್ಯಪ್ರವೃತ್ತವಾಗಿದೆ.

ಇನ್ನು ಮುಂದೆ ಓದಿ 


  In The News 

ಸಾರ್ವಜನಿಕ ಪ್ರಕಟಣೆ :


 

 ನಮ್ಮ ಎಲ್ಲಾ ನಾಗರೀಕರಿಗೆ ಹಾಗೂ ವೀಕ್ಷಕರಿಗೆ    ಶ್ರೀ ವಿಜಯ ನಾಮ ಸಂವತ್ಸರ ದ  ವಸಂತ / ಬುದ್ಧ ಪೂರ್ಣಿಮೆ ಯ   ಹಾರ್ದಿಕ ಶುಭಾಷಯಗಳು

 ಉಪವಿಭಾಗಾಧಿಕಾರಿ (AC) ಗಳು , ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ

ನಗರಸಭಾ ಕಾರ್ಯಾಲಯ, ಸಾಗರ.          

 

- This page is Maintained by Shivamurthy P, Office Manager,  CMC Sagar

No. Of Visitors :
Last Updated   : 25/05/2013  Release History
Release 2.0.0, Powered By Karnataka Municipal Data Society & maintained by Sagara CMC
This website can best viewed with the resolution 1024 * 768 using Internet Explorer 7.0 or above.
Valid CSS!